Wednesday, May 28, 2008

ಮೊರೆ

ಹೇ ನಿಜವೇ ಆಲಿಸೀ ಎದೆಯ ಮೊರೆ
ಆಗಿಹೆನು ಭ್ರಾಂತಿನ ಸೆರೆ
ಕೇಳಿಸದೇ ಅನುದಿನದ ಕರೆ
ಮರೆಯೇನ್ ಒಳಗಣ್ಣಿನ ತೆರೆ
.
ನನ್ ಅಸ್ತಿತ್ವವಾದರೂ ಎದಕು
ಮನದಲಿ ಏಕಿಂತಾ ಒಡಕು
ಸಾಕಿನ್ನು ಹಲಮುಖದ ಬದುಕು
ಮೂಡಿಸೀ ಜೀವಕೆ ಸದುಕು
.
ವಿಷಮ ಜೀವನ ನಿರಂತನ
ಮರೆಯಾಗಿದೆ ನಿಜತನ
ವಿವಶವಾಗಿದೆ ಎನ್ಮನ
ತೋರು ಸತ್ಯವೇ ಕಿರಣ
.
__
Ramesh B.V.
ರಮೇಶ ಬಿ.ವಿ.

3 comments:

  1. ಕವನದ ಆಶಯ ಹಾಗೂ ಬಳಸಿದ ಶಬ್ದಾರ್ಥಗಳು ಚೆನ್ನಾಗಿವೆ. ಆದರೆ ಅಲ್ಲಲ್ಲಿ ಪ್ರಾಸಕ್ಕಾಗಿಯೇ ಬಳಸಿದ ಕೆಲವೊಂದು ಶಬ್ದಗಳು ಕವನದ ಸೌಂದರ್ಯಕ್ಕೆ ಒಡುಕುಂಟು ಮಾಡುತ್ತವೆ. ಇದು ನನ್ನ ಅಭಿಪ್ರಾಯವಷ್ಟೇ! ಏಕೆಂದರೆ ಕವನವೆಂದರೆ "ಅವರವರ ಭಾವಕ್ಕೆ ಬಿಟ್ಟಿದ್ದು" ತಾನೇ?

    ReplyDelete
  2. ಕವನದ ಒಳಾರ್ಥ ಮತ್ತು ಭಾವನೆಗಳು ಸೊಗಸಾಗಿದೆ !

    ReplyDelete
  3. ಕವನದ ಒಳಾರ್ಥ ಮತ್ತು ಭಾವನೆಗಳು ಸೊಗಸಾಗಿದೆ !

    ReplyDelete